ಶನಿವಾರ, ಡಿಸೆಂಬರ್ 15, 2012

ಅವಳಿಗೇನು ಗೊತ್ತು

     

                 ಓದದೆ   ಎಸೆದಳು 
               ನಾ  ಕೊಟ್ಟ  ಅವೆಷ್ಟೋ  ಕವಿತೆಗಳನ್ನು 
                     ಅವಳಿಗೇನು   ಗೊತ್ತು 
                   ಅದರಲ್ಲಿನ   ಪ್ರತಿಯೊಂದು   ಪದಕ್ಕೂ 
                       ಉಸಿರು  ನೀಡಿದವಳು  ಅವಳೇ ಎಂದು

 

                           


-ರಂಗನಾಥ್

ಭಾನುವಾರ, ಸೆಪ್ಟೆಂಬರ್ 9, 2012

ಗುರುವಾರ, ಆಗಸ್ಟ್ 2, 2012

ಬೆಚ್ಚಗಿಡುವೆ ನಮ್ಮ ಒಲವ

    ನನ್ನ ಹೃದಯವು ಗೂಡಾಗಿ 
ನೀ  ಅದರೊಳು 
ಹಕ್ಕಿಯಾದರೆ 
ಮುಚ್ಚಿ ಬಿಡುವೆ  ಎದೆಯ 
ಕದವ 
ಬೆಚ್ಚಗಿಡುವೆ ನಮ್ಮ ಒಲವ -ರಂಗನಾಥ್ 

ಸೋಮವಾರ, ಜುಲೈ 9, 2012

ಎಲ್ಲ ಮೇರೆಗಳ ದಾಟಿಬಿಡುವೆ


ಜಗತ್ತನ್ನೇ ಮಣಿಸಿ 
ನಿನ್ನ ಪದತಲದಲ್ಲಿ 
ಇಟ್ಟು ಬಿಡುವೆ  ಒಂದು 
ಸಾರಿ ಹೂಂ ಅನ್ನು ಗೆಳತಿ 
ಪ್ರೀತಿಯ ಎಲ್ಲ ಮೇರೆಗಳ 
ದಾಟಿಬಿಡುವೆ -ರಂಗನಾಥ್ ಭಾನುವಾರ, ಜುಲೈ 1, 2012

ನನ್ನ ಮಗಳು

ನನ್ನ ಮಗಳು ಇನ್ನು ಹುಟ್ಟಿಲ್ಲ.ಆಗಲೇ ಅವಳ ಆಟ ಶುರುವಾಗಿದೆ.
ಹಾಗಂತ ನನ್ನವಳು ಗರ್ಭಿಣಿ ಅಂತ
ಭಾವಿಸಬೇಡಿ. ನನ್ನ ಮಗಳು ಇನ್ನು
ನನ್ನಲಿಯೇ ಇದ್ದಾಳೆ. ಅಮ್ಮನ ಸೇರುವ
ಕಾತರದಲ್ಲಿ ಕಾಯುತ್ತಿದ್ದಾಳೆ...
ನನ್ನ ಮಗಳು ನನ್ನಲಿಯೇ ಇದ್ದಾಳೆ. 
ಇಲ್ಲ...ಸಲ್ಲದ ಆಸೆ ಹುಟ್ಟುಸುತ್ತಿದ್ದಾಳೆ.
ಹೋದಲ್ಲಿ. ಬಂದಲ್ಲಿ ಅದು ಬೇಕು.
ಇದು ಬೇಕು ಅಂತ ನನಗೆ ಕೊಡಿಸುವಆಸೆ ಹೆಚ್ಚಿಸುತ್ತಿದ್ದಾಳೆ...
ನನ್ನ ಮಗಳು ನನ್ನ ಕಾಡುತ್ತಾಳೆ.ಅಪ್ಪ ಅನ್ನದಿದ್ದರೂ ಅಮ್ಮ ಅನ್ನದೇ
ಇದ್ದರೂ ಚೇಷ್ಟೆ ಮಾಡುತ್ತಾಳೆ.
ಬೇಡವೆಂದರೂ ದೊಡ್ಡ ಕನಸು ಹುಟ್ಟಿಸುತ್ತಿದ್ದಾಳೆ.
ನನ್ನ ಮಗಳು ನನ್ನ ಎದೆಯಲ್ಲಿ ಮುಗುಳು ನಕ್ಕು
ಉಸಿರಿಗೆ ಜೀವದ ಗಾಳಿ ತುಂಬುತ್ತಿದ್ದಾಳೆ...
ನನ್ನ ಮಗಳು ಯಾವಾಗ ಬರುತ್ತಾಳೊ ಗೊತ್ತಿಲ್ಲ.
ನಿರಾಸೆ ಮಾಡೋದಿಲ್ಲ ಎಂಬ ನಂಬಿಕೆ ಇದೆ.
ಅದೇ ಹಾದಿಯಲ್ಲಿ ನಾನು ಈಗ ವೇಟಿಂಗ್.


ಶನಿವಾರ, ಜೂನ್ 9, 2012

ಅದೇಗೆ ಬಂದೆಮನೆಯ   ಕಿಟಕಿ  ಬಾಗಿಲುಗಳನ್ನು

 ಭದ್ರವಾಗಿ  ಮುಚ್ಚಿ  ಮೂರ್ನಾಲ್ಕು ಕಂಬಳಿಯನ್ನು

 ಹೊದ್ದು ಮಲಗಿದ್ದರು ಅದೇಗೆ ಬಂದೆ ನೀನು ನನ್ನ  ಕನಸೊಳಗೆ ??

ಗುರುವಾರ, ಮೇ 31, 2012

ನನ್ನವಳು ಹುಣ್ಣಿಮೆ

ನನ್ನವಳು

                   ನಿಜ ಹೇಳಲಾ ಗೆಳತಿ 
                   ನಿನ್ನ ಚೆಲುವು ನೋಡಿ 
                ಆ ಚಂದಿರ ಕೂಡ ಅವಮಾನಗೊಂಡ
                 ಅಮಾವಾಸ್ಯೆಯ ನೆಪಹೇಳಿ
                  ಒಂದೆರಡು ದಿನತಲೆಮರೆಸಿಕೊಂಡ


-- ರಂಗನಾಥ್